Posts

Showing posts from January 15, 2021

ಮನೆಪಾಠ

Image
  ನೋ ಡನೋಡುತ್ತಿದ್ದಂತೆಯೇ     ಮಗಳು   ನನಗಿಂತ   ಎತ್ತರ ಬೆಳೆದುಬಿಟ್ಟಳು . ಪಾಟೀಚೀಲದಲ್ಲಿ ಪುಸ್ತಕ , ಚೂಪಾಗಿಸಿದ ಪೆನ್ಸಿಲ್ , ನೀರಿನ ಬಾಟಲ್ ಅನ್ನು ಜೋಡಿಸಿಕೊಡಬೇಕಾಗಿದ್ದ ದಿನಗಳಿಂದ , ಪ್ರತಿಯೊಂದನ್ನೂ ತಾನೇ   ಸ್ವ ತಃ   ಮಾಡಿಕೊಳ್ಳುವಷ್ಟು ಜವಾಬ್ದಾರಿ   ಕಲಿತಿದ್ದಳು . ಕಷ್ಟವೆನಿಸುವ ಕೆಲವು ಗಣಿತ ಲೆಕ್ಕಗಳಿಗೆ , ಕನ್ನಡ ವ್ಯಾಕರಣಕ್ಕೆ ಮಾತ್ರ ನನ್ನ ಸಹಾಯ ಕೇಳುತ್ತಿದ್ದಳು . ನನಗೆ ಸಂಜೆಯ ವೇಳೆಗೆ ಹೊತ್ತು ಕಳೆಯುತ್ತಿರಲಿಲ್ಲ .    ಅಕ್ಕಪಕ್ಕದಲ್ಲಿರುವವರು ತಮ್ಮ ಮಕ್ಕಳಿಗೆ ಮನೆಪಾಠ ಮಾಡುವಂತೆ ಕೇಳಿಕೊಂಡರು . ಮಗಳಿಗೆ ಕಲಿಸಿದಂತೆಯೇ ಕಲಿಸಿದರಾಯ್ತು ಎಂದು ಒಪ್ಪಿಕೊಂಡೆ . ಹೀಗೆ ಮೂರ್ನಾಲ್ಕು ವರ್ಷಗಳಿಂದ ಮನೆಪಾಠ ಮಾಡುತ್ತಿದ್ದೇನೆ . ಗಂಟೆ ಆರಾದರೆ ಸಾಕು , ಮನೆ ಮುಂದೆ ಪುಟ್ಟಪುಟ್ಟ ಚಪ್ಪಲಿಗಳು , ಚಿಲಿಪಿಲಿ ಮಾತುಗಳು , ಧಡಬಡ ಓಡಾಟ ಶುರು .    ಪ್ರಾರಂಭದಲ್ಲಿ ಮನೆಪಾಠ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ . ಬರುವುದು ಬರೀ ೮ - ೧೦ ಮಕ್ಕಳೇಆಗಿದ್ದರೂ ಭಲೇ ಕಿಲಾಡಿಗಳು , ಮಾತಿನಮಲ್ಲ ಮಲ್ಲಿಯರು .. ಮಗಳಿಗೆ ಒಂದು ದಿನವೂ ಒಂದೇಟು ಕೊಟ್ಟಿದ್ದಿಲ್ಲ , ಅಂತಹುದರಲ್ಲಿ ಈ ಮಕ್ಕಳಿಗೆ ಶಿಕ್ಷಿಸುವುದು ಹೇಗೆ ? ಕೇವಲ ಮಾತಲ್ಲೇ ಗದರಿಸಿ ಬಗ್ಗಿಸುವುದು ಕಷ್ತವಿತ್ತು . ಎ...