Posts

Showing posts from April 12, 2021

ಮಕ್ಕಳ ಪಾಲನೆ ಮತ್ತು ಶಿಸ್ತು

Image
  ತ ಮ್ಮ ಮಕ್ಕಳನ್ನುಶಿಸ್ತಿನಿಂದ   ಬೆಳೆಸಬೇಕೆಂಬ ಆಸೆ   ಎಲ್ಲಾ ಪೋಷಕರಿಗೂ ಇರುತ್ತದೆ . ನಮಗಂತೂ ಸುಖ ಸೌಲತ್ತು ಇರಲಿಲ್ಲ , ನಮ್ಮ ಮಕ್ಕಳಿಗಾದರೂ   ಇದ್ದಿದ್ದೆಲ್ಲ ಕೊಡಿಸೋಣ ಎಂದು ಕೆಲವರಿಗೆ ಅನಿಸಿದರೆ , ನಮ್ಮ ತಂದೆ ತಾಯಿ ಬಹಳ ಕಟ್ಟುನಿಟ್ಟಾಗಿದ್ದರು ಅದೇ ರೀತಿ ಇದ್ದರೆ ಮಾತ್ರ ಮಕ್ಕಳು ಶಿಸ್ತು   ಕಲಿಯುತ್ತಾರೆ ಅನ್ನುವುದು ಇನ್ನು   ಕೆಲವರ ಅಂಬೋಣ . ಅತೀ ಪ್ರೀತಿ ಮಕ್ಕಳನ್ನು ಹಾಳು ಮಾಡಬಹುದೆಂಬ ಭಯವಿದ್ದರೆ , ಶಿಕ್ಷೆಯಿಂದ ಮಕ್ಕಳಿಗೆ ಪೋಷಕರ ಮೇಲಿನ ಪ್ರೀತಿ ಕಡಿಮೆಯಾಗಬಹುದೆಂಬ ಆತಂಕ   ಕೂಡ ಉಂಟಾಗುತ್ತದೆ.    ಮಕ್ಕಳ ಪಾಲನಾಕ್ರಮದಲ್ಲಿ ಮುಖ್ಯವಾಗಿ ಮೂರು ವಿಧಗಳನ್ನು ಕಾಣಬಹುದು   ಅಧಿಕಾರ ಚಲಾಯಿಸುವ ಅಥವಾ ಅತೀ ಕಠಿಣ ಶಿಸ್ತಿನಿಂದ ಕೂಡಿದ ಪಾಲನೆ :    ಇಲ್ಲಿ ಪೋಷಕರು ಸಂಪೂರ್ಣವಾಗಿ ತಮ್ಮ ಮಕ್ಕಳನ್ನು ನಿಯಂತ್ರಿಸುತ್ತಾರೆ . ಪ್ರತಿಯೊಂದಕ್ಕೂ ತಾವು ಮಕ್ಕಳಿಗೆ ಆದೇಶವನ್ನು ನೀಡಿ , ಕೊಟ್ಟ ಕೆಲಸವನ್ನು   ಮರು ಮಾತನಾಡದೇ ಪಾಲಿಸುವಂತೆ ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ . ಶಿಕ್ಷೆಯ ಭಯ ಮತ್ತು ಬಹುಮಾನದ ಆಸೆಯನ್ನು ಮಕ್ಕಳಲ್ಲಿ ಹುಟ್ಟಿಸಿ ಚೌಕಟ್ಟನ್ನು ಹಾಕುತ್ತಾರೆ . ಬಾಲ್ಯದಲ್ಲೇನೋ ಮಕ್ಕಳು ಭಯದಿಂದ   ವಿಧೇಯತೆಯನ್ನು ತೋರಿಸುತ್ತ...