Posts

Showing posts from January 21, 2021

Experiment ಚಿಗಳಿ

Image
  Experimen t            :       ಚಿಗಳಿ   ತಯಾರಿಸುವುದು .   Time                      :    ಪ್ರೈಮರಿ , ಹೈಸ್ಕೂಲು ಶಾಲೆಯ    ಬೇಸಿಗೆ   ರಜಾ ದಿನಗಳು.   Aim                   :     ಸಿಕ್ಕಾಪಟ್ಟೆ ರುಚಿಯಾದ ಚಿಗಳಿ ತಯಾರಿಸುವುದು ಮತ್ತು ತಿನ್ನುವುದು. Apparatus          :     ಕುಟ್ಟಣಿ    ಅಥವಾ  ಪುಟ್ಟ ರುಬ್ಬುವ ಕಲ್ಲು  , ಹೊಸಾ  ಪೊರಕೆಯ 3-4 ಕಡ್ಡಿಗಳು      ( ಹೊಸ ಪೊರಕೆ ಇಲ್ಲದಿದ್ದರೆ ಅಮ್ಮ ಅಂಗಳವನ್ನು ಗುಡಿಸುವ ಪೊರಕೆಯ  ಕಡ್ಡಿಯನ್ನೇ ತೆಗೆದು ಸ್ವಚ್ಛವಾಗಿ ತೊಳೆದುಕೊಳ್ಳತಕ್ಕದ್ದು. ) Ingredients       :   ಚೊಕ್ಕ ಮಾಡಿದ ಹುಣಸೇ ಹಣ್ಣು , ಹಸಿ ಮೆಣಸಿನಕಾಯಿ  , ಬೆಲ್ಲ, ಉಪ್ಪು, ಇಂಗು    ಮತ್ತು ಬೆಳ್ಳುಳ್ಳಿ ( optional) Google Image People Involved:    ರಜಕ್ಕೆಂದು ಮನೆಗೆ ಬಂದ ನೆಂಟರ ಮಕ್ಕಳು , ಮತ್ತು ಮನೆಯಲ್ಲಿರುವ  ತರಲೆ   ಸೈನ್ಯ.               Time                      :  ಮಧ್ಯಾಹ್ನ ಊಟದ ಕಾರ್ಯಕ್ರಮ ಮುಗಿದು ಮಲಗಿರುವ  ಅಜ್ಜಿ , ಅಮ್ಮ,  ಚಿಕ್ಕಮ್ಮ  ಎಲ್ಲರೂ ಸಣ್ಣ ನಿದ್ದೆ ಮುಗಿಸಿ ಏಳುವವರೆಗೆ ...  Procedure            :    ಹುಣಸೇ ಹಣ್ಣು , ಹಸಿಮೆಣಸಿನಕಾಯಿ , ಬೆಲ್ಲ , ಉಪ್ಪು , ಇಂ ಗು , ಬೆಳ್ಳುಳ್ಳಿ    ಎಲ್ಲವನ್ನು ಪುಟ್ಟ ರುಬ್ಬೋ ಕಲ್ಲಿನಲ್ಲಿ ಹದವಾಗಿ ರುಬ್ಬುವುದು . ಅನಂತರ    ಆ   ರುಬ್ಬಿದ ಮಿ