ಸಂಕ್ರಾಂತಿ ಹಬ್ಬ
ಊ ರಿನಿಂದ ಬಂದ ನೆಂಟರನ್ನು ಶಾಪಿಂಗ್ ಗೆಂದು ಗಾಂಧಿಬಝಾರಿಗೆ ಕರೆದುಕೊಂಡು ಹೋಗಿದ್ದೆ . ಅಲ್ಲಿ ಪ್ರತಿಷ್ಠಿತ ಇಮಿಟೇಟೆಡ್ ಜ್ಯುವೆಲರಿ ಅಂಗಡಿಯನ್ನು ಹೊಕ್ಕೆವು . ನಾನಾ ರೀತಿಯ ಸರ , ಬಳೆ ನೆಕ್ಲೇಸು , ತೋಳಬಂಧಿಗಳು , ಆಕರ್ಷಕ ಜಡೆಬಿಲ್ಲೆಗಳನ್ನೆಲ್ಲ ನೋಡಿದೆವು . ಬಂಗಾರವನ್ನೂ ನಾಚಿಸುವಂತಹ ಕುಸುರಿ , ವಿನ್ಯಾಸಗಳಿದ್ದ ಆಭರಣಗಳಿದ್ದವು . ನನಗೆ ನೆನಪಿದ್ದಂತೆ ಎಸ್ . ಎಸ್ . ಎಲ್ . ಸಿ ಪಾಸಾಗುವವರೆಗೊ ನಾವೆಂದೂ ಬಂಗಾರದ ಆಭರಣಗಳನ್ನು ಧರಿಸಿದ್ದಿಲ್ಲ , ಆ ಕಾಲದಲ್ಲಿ ಬಹಳಷ್ಟು ಜನರ ಆರ್ಥಿಕ ಪರಿಸ್ಥಿತಿ ಒಂದೇ ತರಹದ್ದು , ನಾವಷ್ಟೇ ಅಲ್ಲ , ಶಾಲೆಗೆ ಬರುವ ಬಹಳಷ್ಟು ಹುಡುಗಿಯರು ನಮ್ಮಂತೇ ಉಮಾಗೋಲ್ಡ್ , ರೋಲ್ಡ್ ಗೋಲ್ಡ್ , ರೆಡಿಮೇಡ್ ರಿಂಗುಗಳನ್ನು ಧರಿಸುತ್ತಿದ್ದರು . ಈಗೆಲ್ಲಾ ಚಿನ್ನದ ಆಭರಣಗಳೂ ರೆಡಿಮೇಡ್ ದೊರೆಯುತ್ತವೆ , ಆಗೆಲ್ಲ ಚಿನ್ನವನ್ನು ಬರೀ ಅಕ್ಕಸಾಲಿಗರ ಅಂಗಡಿಗೆ ಹೋಗಿ ಮಾಡಿಸುತ್ತಿದ್ದುದರಿಂದ ರೆಡಿಮೇಡ್ ಅಂದರೆ ನಕಲಿ ಅನ್ನೋ ಅರ್ಥ ಕೊಡುತ್ತಿತ್ತು . ವರ್ಷಕ್ಕೊಮ್ಮೆ ಸಂಕ್ರಾಂತಿ ಹಬ್ಬಕ್ಕೆ ಮಾತ್ರ ನನ್ನ ಅಕ್ಕ ಮತ್ತು ನನಗೆ ಬಂಗಾರ ಧರಿಸುವ ಅವಕಾಶ ಸಿಗ್ತಿತ್ತು . ನಮ್ಮ ಅಜ್ಜಿಯ ಹತ್ತಿರ ಅವರ ಅತ್ತೆ ಅಂದರೆ ನಮ್ಮ ಮುತ್ತಜ್ಜಿ ಕೊಟ್ಟ ಒಂದು ಚಿನ್ನದ ...