Posts

Showing posts from January 21, 2022

ಒಂದು ತಂಬಿಟ್ಟಿನ ಕತೆ

Image
  ನಾ ವು ಚಿಕ್ಕವರಿದ್ದಾಗ ನಮ್ಮೂರಲ್ಲಿ ಇದ್ದಿದ್ದು ಮೂರೇ ಮೂರು ಟಾಕೀಸು . ಆಸ್ಫೋಟ , ಆಕಸ್ಮಿಕ , ಜೀವನಚೈತ್ರ ಇವೆಲ್ಲ ಸಿನೆಮಾಗಳು ನಮ್ಮೂರು   ಸಾಗರ ಹಾಗೂ   ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿದ್ದು ಅನ್ನುವ ಕಾರಣಕ್ಕೆ ಥೀಯೇಟರ್ ನಲ್ಲಿ ನೋಡಿದ್ದು , ಅಬ್ಬಬ್ಬಾ ಅಂದ್ರೆ   ಒಟ್ಟಾರೆಯಾಗಿ ೮ - ೧೦ ಸಿನೆಮಾ ನೋಡಿದ್ದಿರಬಹುದು ಅಷ್ಟೇ .        ನನಗೆ   ನೆನಪಿದ್ದಂತೆ   ನೋಡಿದ ಮೊದಲ   ಸಿನೆಮಾ ಬಡ್ಡಿ ಬಂಗಾರಮ್ಮ , ಬೇಸಿಗೆ ರಜಕ್ಕೆಂದು ಊರಿಂದ ಬಂದಿರುವ ಅಕ್ಕ - ಅಣ್ಣಂದಿರ   ಜೊತೆಯಲ್ಲಿ ನೋಡಲು ಹೋಗಿದ್ದು , ಥೀಯೇಟರ್ ನ ಅಂಗಳದಲ್ಲಿ ನಾನು ಅದ್ಹೇಗೋ ತಪ್ಪಿಸಿಕೊಂಡು , ಪೆಚ್ಚುಮೋರೆ ಹಾಕಿ ನಿಂತಿದ್ದೆ , ಇನ್ನೇನು ಗಂಗೆ ಭಾಗೀರಥಿ ಸುರಿಸಬೇಕು ಅನ್ನುವಷ್ಟರಲ್ಲಿ ಅತ್ತೆಯ ಮಗಳು ಬಂದು ," ಇಲ್ಲಿದೀಯಾ ಪುಟ್ಟಿ ?" ಅಂತ ನನ್ನನ್ನ ಎತ್ತಿಕೊಂಡು ಸಮಾಧಾನ ಮಾಡಿದ್ದಳು .    Google Image    ನಂತರ ನೋಡಿದ ಸಿನೆಮಾ   ರಥಸಪ್ತಮಿ . ಅಕ್ಕನ ಗೆಳತಿಯ ಅಮ್ಮ , ನಾವು ಓದುವ   ಶಾಲೆಯಲ್ಲಿ ಹಿಂದಿ ಟೀಚರ್ ಆಗಿದ್ದರು,   ಹಾಗಾಗಿ ಅವರೊಟ್ಟಿಗೆ ಹೋಗಲು ಮನೆಯಲ್ಲಿ ಒಪ್ಪಿಗೆ ಕೊಟ್ಟಿದ್ದು . ಟೀಚರ್ ಮನೆಯ ನಾಲ್ಕು ಜನ , ನಾನು ಮತ್ತು ಅಕ್ಕ ಸೇರಿ   ಫಸ್ಟ್ ಶೋ ಸಿನೆಮಾಗೆ ಹೋಗಿದ್ದಾಯ್ತು . ಸಿನೆಮಾಗೆ ಹೋಗುವ ಸಂಭ್ರಮ ಒಂದು