ನೆನಪಿನ ರೈಲು
ಸಾ ಗರಕ್ಕೆ ರೈಲು ಸಂಚಾರ ಪುನಃ ಆರಂಭಗೊಳ್ಳಲಿದೆ . ಎಂತಹ ಸಂತೋಷದ ಸುದ್ದಿ .. ಹೇಳಿ ಕೇಳಿ ಸಾಗರ ನನ್ನೂರು , ನನ್ನ ತವರೂರು . ಖುಷಿಪಡಲು ಸಾಕಲ್ಲವೇ ಇಂತಹದೊಂದು ಸಿಹಿ ಸಮಾಚಾರ . 20-25 ವರ್ಷಗಳ ಹಿಂದಿನ ವಿಷಯ ಬೆಂಗಳೂರಿನಿಂದ ಶಿವಮೊಗ್ಗೆಯವರೆಗೆ broad gauge ರೈಲು ಸಂಚಾರದ ವ್ಯವಸ್ಥೆ ಇತ್ತು . ಅಲ್ಲಿಂದ ಸಾಗರ , ತಾಳಗುಪ್ಪಕ್ಕೆ ಹೋಗುವವರು meter gauge ರೈಲಿನಲ್ಲಿ ಪ್ರಯಾಣಿಸಬೇಕಿತ್ತು . ಭರಪೂರ ಜನರು ಪ್ರಯಾಣಿಸುತ್ತಿದ್ದರು ಕೂಡ . ರೈಲಿನಲ್ಲಿ ಸಂಚರಿಸುವ ನಮ್ಮ ಈ ಆಸೆಯನ್ನು ಪೂರೈಸಲು ಚಿಕ್ಕಪ್ಪ 3-4 ಬಾರಿ ನಮಗೆ ಸಾಗರದಿಂದ ತಾಳಗುಪ್ಪೆಗೆ ಕರೆದು ಕೊಂಡು ಹೋಗಿದ್ದುಂಟು . ಪ್ರಯಾಣದ ಒಂದೊಂದು ನಿಮಿಷವನ್ನು ನಾವು ಸಿಕ್ಕಾಪಟ್ಟೆ enjoy ಮಾಡುತಿದ್ದೆವು . ಕಾಲ ಕಳೆದಂತೆ ಸಾಗರದಿಂದ ಬೆಂಗಳೂರಿಗೆ ಖಾಸಗಿ ಬಸ್ಸುಗಳ ಓಡಾಟ ಶುರುವಾಯಿತು .72 ಕಿ ಮೀ ದೂರದಶಿವಮೊಗ್ಗೆ ತಲುಪಲು ಪುಟ್ಟ ರೈಲು 3-4 ಗಂಟೆ ತೆಗೆದುಕೊಳ್ಳುತ್ತಿತ್ತು . ರೈಲ್ವೇ ಕ್ರಾಸಿಂಗ್ ಬಳಿ ಸ್ವತಃ ಗಾರ್ಡ್ ರೈಲಿಂದ ಇಳಿದು ಗೇಟ್ ಹಾಕುವುದು , ರೈಲು ಕ್ರಾಸಿಂಗ್ ದಾಟಿದ ಮೇಲೆ ಗೇಟ್ ತೆರೆಯುವುದು ಮಾಡುತ್ತಿದ್ದ , ಓಡಿ ಹೋಗಿ ಚಲಿಸುತ್ತಿದ್ದ ರೈಲು ಹತ್ತುತ್...