Experiment ಚಿಗಳಿ
Experiment : ಚಿಗಳಿ ತಯಾರಿಸುವುದು.
Time : ಪ್ರೈಮರಿ , ಹೈಸ್ಕೂಲು ಶಾಲೆಯ ಬೇಸಿಗೆ ರಜಾ ದಿನಗಳು.
Aim : ಸಿಕ್ಕಾಪಟ್ಟೆ
ರುಚಿಯಾದ ಚಿಗಳಿ ತಯಾರಿಸುವುದು ಮತ್ತು ತಿನ್ನುವುದು.
Apparatus : ಕುಟ್ಟಣಿ ಅಥವಾ ಪುಟ್ಟ ರುಬ್ಬುವ ಕಲ್ಲು , ಹೊಸಾ ಪೊರಕೆಯ 3-4 ಕಡ್ಡಿಗಳು ( ಹೊಸ ಪೊರಕೆ ಇಲ್ಲದಿದ್ದರೆ ಅಮ್ಮ ಅಂಗಳವನ್ನು ಗುಡಿಸುವ ಪೊರಕೆಯ ಕಡ್ಡಿಯನ್ನೇ ತೆಗೆದು ಸ್ವಚ್ಛವಾಗಿ ತೊಳೆದುಕೊಳ್ಳತಕ್ಕದ್ದು. )
Ingredients : ಚೊಕ್ಕ ಮಾಡಿದ ಹುಣಸೇ ಹಣ್ಣು, ಹಸಿ ಮೆಣಸಿನಕಾಯಿ , ಬೆಲ್ಲ, ಉಪ್ಪು, ಇಂಗು ಮತ್ತು ಬೆಳ್ಳುಳ್ಳಿ (optional)
Google Image |
People Involved: ರಜಕ್ಕೆಂದು ಮನೆಗೆ ಬಂದ ನೆಂಟರ ಮಕ್ಕಳು, ಮತ್ತು ಮನೆಯಲ್ಲಿರುವ ತರಲೆ ಸೈನ್ಯ.
Time : ಮಧ್ಯಾಹ್ನ ಊಟದ ಕಾರ್ಯಕ್ರಮ ಮುಗಿದು ಮಲಗಿರುವ ಅಜ್ಜಿ,ಅಮ್ಮ, ಚಿಕ್ಕಮ್ಮ ಎಲ್ಲರೂ ಸಣ್ಣ ನಿದ್ದೆ ಮುಗಿಸಿ ಏಳುವವರೆಗೆ...
Procedure : ಹುಣಸೇ ಹಣ್ಣು,ಹಸಿಮೆಣಸಿನಕಾಯಿ, ಬೆಲ್ಲ ,ಉಪ್ಪು, ಇಂಗು,ಬೆಳ್ಳುಳ್ಳಿ ಎಲ್ಲವನ್ನು ಪುಟ್ಟ ರುಬ್ಬೋ ಕಲ್ಲಿನಲ್ಲಿ ಹದವಾಗಿ ರುಬ್ಬುವುದು.ಅನಂತರ ಆ ರುಬ್ಬಿದ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಯನ್ನು ಕಟ್ಟಬೇಕು. ಆ ಉಂಡೆಗಳನ್ನು ಹಿಡಿಯ ಕಡ್ಡಿಗೆ ಸಿಕ್ಕಿಸಬೇಕು. ನಂತರ ಅದನ್ನು ಲಾಲಿಪಾಪ್ ತರ ಚೀಪಬೇಕು.
Precaution : ಮೆಣಸಿನಕಾಯಿ ಜಜ್ಜುವಾಗ , ಜಜ್ಜುತಿರುವವರು ಮತ್ತು ಸುತ್ತಲೂ ಕುಳಿತಿರುವರು ಕಣ್ಣು ಮುಚ್ಚಿಕೊಳ್ಳತಕ್ಕದ್ದು.
Conclusion : ಖಟ್ಟಾ,ಮೀಠಾ,ತೀಖಾ,ನಮ್ಕೀನ್ ಚಿಗಳಿ ಸೂಪರ್ ಟೇಸ್ಟಿಯಾಗಿರುತ್ತದೆ.
Error : ಮೆಣಸಿನಕಾಯಿ ಖಾರ ಜಾಸ್ತಿಯಾಗಿದ್ದಲ್ಲಿ ಚಿಗಳಿಯನ್ನು ಸವಿಯುವಾಗ ಕಿವಿಯಲ್ಲಿ ಬೆಂಕಿ ಹೊತ್ತಿಕೊಂಡಂತಾಗುತ್ತದೆ. ಒಂಥರಾ ಬಿಸಿಗಾಳಿ ಕಿವಿಯಿಂದ ಹೊರಬಂದ ರಭಸಕ್ಕೆ ಅಕ್ಕಪಕ್ಕ ಕುಳಿತಿರುವವರ ಗಲ್ಲ ಸುಟ್ಟುಹೋದರೂ ಆಶ್ಚರ್ಯವಿಲ್ಲ!!...
(ಜೂನ್
2012 ರಲ್ಲಿ
ಬರೆದದ್ದು)