ಮಕ್ಕಳ ಪಾಲನೆ ಮತ್ತು ಶಿಸ್ತು

 

ಮ್ಮ ಮಕ್ಕಳನ್ನುಶಿಸ್ತಿನಿಂದ  ಬೆಳೆಸಬೇಕೆಂಬ ಆಸೆ  ಎಲ್ಲಾ ಪೋಷಕರಿಗೂ ಇರುತ್ತದೆ .ನಮಗಂತೂ ಸುಖ ಸೌಲತ್ತು ಇರಲಿಲ್ಲ ,ನಮ್ಮ ಮಕ್ಕಳಿಗಾದರೂ  ಇದ್ದಿದ್ದೆಲ್ಲ ಕೊಡಿಸೋಣ ಎಂದು ಕೆಲವರಿಗೆ ಅನಿಸಿದರೆ ,ನಮ್ಮ ತಂದೆ ತಾಯಿ ಬಹಳ ಕಟ್ಟುನಿಟ್ಟಾಗಿದ್ದರು ಅದೇ ರೀತಿ ಇದ್ದರೆ ಮಾತ್ರ ಮಕ್ಕಳು ಶಿಸ್ತು  ಕಲಿಯುತ್ತಾರೆ ಅನ್ನುವುದು ಇನ್ನು  ಕೆಲವರ ಅಂಬೋಣ. ಅತೀ ಪ್ರೀತಿ ಮಕ್ಕಳನ್ನು ಹಾಳು ಮಾಡಬಹುದೆಂಬ ಭಯವಿದ್ದರೆ , ಶಿಕ್ಷೆಯಿಂದ ಮಕ್ಕಳಿಗೆ ಪೋಷಕರ ಮೇಲಿನ ಪ್ರೀತಿ ಕಡಿಮೆಯಾಗಬಹುದೆಂಬ ಆತಂಕ  ಕೂಡ ಉಂಟಾಗುತ್ತದೆ.

   ಮಕ್ಕಳ ಪಾಲನಾಕ್ರಮದಲ್ಲಿ ಮುಖ್ಯವಾಗಿ ಮೂರು ವಿಧಗಳನ್ನು ಕಾಣಬಹುದು

 

ಅಧಿಕಾರ ಚಲಾಯಿಸುವ ಅಥವಾ ಅತೀ ಕಠಿಣ ಶಿಸ್ತಿನಿಂದ ಕೂಡಿದ ಪಾಲನೆ :

   ಇಲ್ಲಿ ಪೋಷಕರು ಸಂಪೂರ್ಣವಾಗಿ ತಮ್ಮ ಮಕ್ಕಳನ್ನು ನಿಯಂತ್ರಿಸುತ್ತಾರೆ. ಪ್ರತಿಯೊಂದಕ್ಕೂ ತಾವು ಮಕ್ಕಳಿಗೆ ಆದೇಶವನ್ನು ನೀಡಿ ,ಕೊಟ್ಟ ಕೆಲಸವನ್ನು  ಮರು ಮಾತನಾಡದೇ ಪಾಲಿಸುವಂತೆ ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಶಿಕ್ಷೆಯ ಭಯ ಮತ್ತು ಬಹುಮಾನದ ಆಸೆಯನ್ನು ಮಕ್ಕಳಲ್ಲಿ ಹುಟ್ಟಿಸಿ ಚೌಕಟ್ಟನ್ನು ಹಾಕುತ್ತಾರೆ .ಬಾಲ್ಯದಲ್ಲೇನೋ ಮಕ್ಕಳು ಭಯದಿಂದ  ವಿಧೇಯತೆಯನ್ನು ತೋರಿಸುತ್ತಾರೆ. ತಂದೆ ತಾಯಿಯಿಂದ ಬೈಗುಳ ,ಪೆಟ್ಟು ಅಥವಾ ಬೇರೆ ಬೇರೆ ರೀತಿಯ ಶಿಕ್ಷೆಗೆ ಹೆದರಿ ಹೇಳಿದ ಮಾತುಗಳನ್ನು ಪಾಲಿಸುತ್ತಾರೆ .

   ಇಂತಹ ಪಾಲನೆಯಿಂದ ಕೆಲವು ಸಲ  ಮಕ್ಕಳು ತಾವು ಸ್ವಂತವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದಿಲ್ಲ .ಹೇಳಿದನ್ನು ಮಾಡು  ಅನ್ನುವಂತಾಗುತ್ತದೆ. ಬಹುಮಾನದ ಆಸೆಯಲ್ಲಿ , ಪೋಷಕರ ಮೆಚ್ಚುಗೆ ಗಳಿಸುವ ನಿಟ್ಟಿನಲ್ಲಿ ಮಕ್ಕಳು ತಮ್ಮ ಸ್ವಂತ  ಆಸಕ್ತಿ ಇರುವ  ವಿಷಯಗಳಿಂದ ವಂಚಿತರಾಗಬಹುದು .ಮೆಚ್ಚಿಸುವ ಭರದಲ್ಲಿ ಸುಳ್ಳು ಹೇಳುವ ಸಾಧ್ಯತೆಯೂ ಹೆಚ್ಚು. ಬೆಳೆಬೆಳೆಯುತ್ತಾ ಪೋಷಕರ ಬಗ್ಗೆ ದ್ವೇಷ ,ಧಿಕ್ಕಾರದ ಮನೋಭಾವ ಅವರಲ್ಲಿ ಚಿಗುರಿಕೊಳ್ಳುತ್ತದೆ ಕೆಲವು ಮಕ್ಕಳು ತಂದೆ ತಾಯಿಯ ವಿರುಧ್ಧ ಕೋಪದಿಂದ  ಬಂಡಾಯ ಏಳುತ್ತಾರೆ.

 

Google Image 

ರಣಾಗುವ ಅಥವಾ ಧಾರಾಳವಾಗಿ ಒಪ್ಪಿಕೊಳ್ಳುವ ಪಾಲನಾ ಕ್ರಮ :

   ಇಲ್ಲಿ ಪೋಷಕರು ತಮ್ಮ ಮಕ್ಕಳು ಹೇಳಿಹೇಳಿದ್ದನೆಲ್ಲ ಒಪ್ಪಿಕೊಂಡು ಅವರಿಗೆ ಬೇಕಾದ ಸೌಲತ್ತುಗಳನ್ನೆಲ್ಲ ಒದಗಿಸುತ್ತಾರೆ. ಯಾವುದೇ ರೆಟಿಯ ಸಲಹೆಗಳನ್ನು ನೀಡದೆ ,ಒಂದು ರೀತಿಯ ಶಿಸ್ತನ್ನು ತೋರಿಸಿದಂತೆ  ಮಾಡಿ ನಂತರ ಮಕ್ಕಳು ಅದನ್ನು ಮುರಿದರೂ ಅಡ್ಡಿಯಿಲ್ಲ ಅನ್ನುವಂತಹ ವರ್ತನೆ ತೋರಿಸುತ್ತಾರೆ . ಎಲ್ಲಿ ಮಕ್ಕಳು ತಮ್ಮನ್ನು ಇಷ್ಟ ಪಡುವುದಿಲ್ಲವೋ ,ಎಲ್ಲಿ ನೊಂದುಕೊಳ್ಳುತ್ತಾರೋ ಎಂಬ ಆತಂಕದಲ್ಲಿ ಮಕ್ಕಳ ತಾಳಕ್ಕೆ ಕುಣಿಯುತ್ತಾರೆ. ಇಂತಹ ಮಕ್ಕಳು ಶಾಲೆಯಲ್ಲಿ ಎಲ್ಲರಿಗೂ ಅಪ್ರಿಯರು  ಏಕೆಂದರೆ ಹಠ ಮಾಡಿ ಕೆಲಸ ಸಾಧಿಸಿ ತಮ್ಮಿಚ್ಛೆಯಂತೆ ನಡೆಯುವ ಗುಣ ಅವರಲ್ಲಿ ಮೈಗೂಡಿಕೊಂಡಿರುತ್ತದೆ.

   ದೊಡ್ಡವರಾಗುತ್ತಾ ಅವರ ಬೇಡಿಕೆಗಳ ಪಟ್ಟಿ  ಬೆಳೆಯುತ್ತಾ ಹೋಗುತ್ತದೆ.  ಅವನ್ನು ಪೂರೈಸಲಾಗದೆ  ಪೋಷಕರು ಹತಾಶರಾಗುತ್ತಾರೆ. ತಮ್ಮ ಅವಶ್ಯಕತೆಗಳನ್ನು  ಬದಿಗೊತ್ತಿ ಮಕ್ಕಳಿಗೆ ಖುಷಿ ಪಡಿಸುವುದರಲ್ಲೇ ಇರುತ್ತಾರೆ . ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಾಗದ ಪೋಷಕರನ್ನು ಅವರ ಮಕ್ಕಳೇ ಗೌರವಿಸುವುದನ್ನು ನಿಲ್ಲಿಸುತ್ತಾರೆ. ಹೀಗೆ ವರ್ತಿಸಿದ ಮಕ್ಕಳನ್ನು ಸುತ್ತಮುತ್ತಲಿನ ಜನರೂ ಇಷ್ಟಪಡುವುದಿಲ್ಲ

ಸಮಾನತೆಯ ಅಥವಾ ಧನಾತ್ಮಕ ಪಾಲನೆ :

   ಇಲ್ಲಿ ಮಕ್ಕಳ್ನು ಪೋಷಕರಿಗೆ ಸಮಾನರೆಂದು  ಪರಿಗಣಿಸಲಾಗುತ್ತದೆ ಸಮಾನರು ಎಂದು ಪರಿಗಣಿಸುವುದು ವಯಸ್ಸು ಹಾಗು ಬುದ್ಧಿಮತ್ತೆಯಲ್ಲಲ್ಲ , ಒಬ್ಬ ಮನುಷ್ಯನಾಗಿ ಮಕ್ಕಳೂ ಪೋಷಕರೂ ಸಮ ಎಂಬ ಅರ್ಥದಲ್ಲಿ . ಮಕ್ಕಳನ್ನುಗೌರವದಿಂದ ಕಾಣಲಾಗುತ್ತದೆ ಮತ್ತು ಪೋಷಕರು ಮಕ್ಕಳಿಗೆ ಏಕ ಪ್ರಮಾಣದ  ಜವಾಬ್ದಾರಿ ಮತ್ತು ಸ್ವಾತಂತ್ರ್ಯವನ್ನು ಕೊಡಲಾಗುತ್ತದೆ.ಮಕ್ಕಳಿಗೆ ಅವರಿಗಿರುವ ಮಿತಿಯನ್ನು ತಿಳಿಸಿ  ಆ ಗಡಿಯ ಒಳಗೆ  ಅವಕಾಶಗಳನ್ನು ಕಲ್ಪಿಸಿ ಕೊಡಲಾಗುತ್ತದೆ. ಇಂತಹ ಶಿಸ್ತಿನ ಪಾಲನೆಯಲ್ಲಿ  ಬಹುಮಾನದ ಆಸೆ , ಶಿಕ್ಷೆಯ ಭಯಕ್ಕಿಂತ  ಬಂದಿರುವ ಸವಾಲಿನ ಪರಿಹಾರಕ್ಕೆ ಜಾಸ್ತಿ ಒತ್ತು ಕೊಡಲಾಗುತ್ತದೆ.

   
ಮಕ್ಕಳಿಗೆ ತಮ್ಮ ನಿರ್ಧಾರಗಳನ್ನು ತಾವೇ  ತೆಗೆದುಕೊಳ್ಳುವ , ತಮ್ಮ ತಪ್ಪನ್ನು ತಾವೇ ತಿದ್ದಿ  ಕಲಿಯುವ ಆಯ್ಕೆ ಮತ್ತು ಅವಕಾಶವನ್ನು ಕಲ್ಪಿಸಲಾಗುತ್ತದೆ.ಹಾಗಾಗಿ ಮಕ್ಕಳಿಗೆ ತಮ್ಮ ಮೇಲಿನ ನಿಯಂತ್ರಣ , ತಮ್ಮ ಶಕ್ತಿ ಮತ್ತು ಬುದ್ಧಿಮತ್ತೆಯ ಪರಿಮಾಣ ತಿಳಿದಿದ್ದು, ತಾವು ತೆಗೆದುಕೊಂಡ ಹೆಜ್ಜೆಗೆ ತಾವೇ ಜವಾಬ್ಧಾರಿ ಎನ್ನುವುದೂ ಮನದಟ್ಟಾಗುತ್ತದೆ.

ಇದರಿಂದ ಪೋಷಕರ  ಮತ್ತು ಮಕ್ಕಳ ನಡುವಿನ ವಾಗ್ಯುದ್ಧ , ಕಲಹಗಳು ಕಡಿಮೆಯಾಗಿ ಪರಸ್ಪರ ಸಹಕಾರ ಮತ್ತು ಗೌರವಕ್ಕೆ ದಾರಿ ಮಾಡಿ ಕೊಡುತ್ತದೆ .


(Translated and summarised referring Teaching Diploma Text Book )

 

 

 

 

Popular posts from this blog

ಮನೆಪಾಠ

ಅಜ್ಜನ ನೆನಪು

ಒಂದು ತಂಬಿಟ್ಟಿನ ಕತೆ