Posts

Showing posts with the label ಬಹುಮಾನ

600 ರೂಪಾಯಿಗಳು!!!!

Image
  ಮೊ ನ್ನೆ ಕಪಾಟು ಕ್ಲೀನ್ ಮಾಡುತ್ತಿರಬೇಕಾದರೆ   ಮೂರು ಲಕೋಟೆಗಳು  ಸಿಕ್ಕವು .. ನನ್ನ ಮಗಳು ನರ್ಸರಿಯ ಮೂರೂ ವರ್ಷಗಳಲ್ಲಿ ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಗಳಿಸಿದ ನಗದು ಬಹುಮಾನದ ಲಕೋಟೆಗಳವು . ನನಗೆ ದೊರೆತ ಮೊದಲ ನಗದು ಬಹುಮಾನದ ಸಂದರ್ಭವನ್ನು ನೆನೆಸಿಕೊಂಡೆ . ಪ್ರೈಮರಿ ಶಾಲೆಯ ಆಟೋಟ ಸ್ಪರ್ಧೆಗಳಲ್ಲಿ ಕೆಲವೊಮ್ಮೆ , ನಮ್ಮ ಸಮಾಜದಲ್ಲಿ ಏರ್ಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮ , ರಂಗೋಲಿ ಸ್ಪರ್ಧೆಗಳಲ್ಲಿ ಬಹುತೇಕ ಬಾರಿ ನನಗೆ ಬಹುಮಾನ ಬಂದಿದ್ದುಂಟು . ಅವೆಲ್ಲ ಪ್ಲೇಟು , ಲೋಟ , ತಟ್ಟೆ ಅಥವಾ ಫೋಟೊ ಫ್ರೇಮ್ ಇವೇ ಆಗಿರುತ್ತಿದ್ದವು . ನನಗೆ ನೆನಪಾದ ಹಾಗೆ ಹತ್ತನೇ ತರಗತಿಯಲ್ಲಿ ಕನ್ನಡ ಪ್ರಥಮ ಭಾಷೆಗೆ ತರಗತಿಯಲ್ಲಿಯೇ ಹೆಚ್ಚು ಅಂಕ ಗಳಿಸಿದ್ದಕ್ಕೆ ನೆಚ್ಚಿನ ಉಪಾಧ್ಯಾಯರಾದ ಜಾರ್ಜ್ ರಾಡ್ರಿಗಸ್ ರವರು 101 ರೂ ನಗದು ಬಹುಮಾನವನ್ನು   ಅಂದಿನ ಎ . ಸಿ . ಪಿ . ಯವರ ಕೈಯಲ್ಲಿ ಕೊಡಿಸಿದ್ದರು.    ಇದಾದ ಎರಡು ವರ್ಷಗಳ ನಂತರ ಕಾಲೇಜಿನಿಂದ ಪತ್ರವೊಂದು ಬಂದಿತ್ತು , ಮೆರಿಟ್ ಸ್ಕಾಲರ್ ಶಿಪ್ ಎಂದು 600 ರೂ ಗಳ ನಗದು ಬಹುಮಾನವನ್ನು ಸ್ವೀಕರಿಸಬೇಕಾಗಿಯೂ , ಪಿ ಯು ಸಿ ಯಲ್ಲಿ ಕನ್ನಡ ವಿಷಯಕ್ಕೆ ತಾಲ್ಲೂಕಿಗೇ ಹೆಚ್ಚು ಅಂಕ ಬಂದಿರುವುದರಿಂದ   ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದಾಗಿ ಸನ್...