ತಮಾಷಾ : ಖಂಡಿತ ಇದು ತಮಾಷೆಯಲ್ಲ!!
ಶಾ ಲೆಗೆ ಹೋಗುವ ಪೋರನಿಗೆ ವೃದ್ಧನಿಂದ ಕತೆ ಕೇಳುವ ಕುತೂಹಲ , ಕೇಳಿದಷ್ಟೂ ಮುಂದೇನಾಗುತ್ತದೆ ಎಂದು ತಿಳಿದುಕೊಳ್ಳುವ ಬಯಕೆ , ಬಹುಶಃ ಈ connecting the dots ಅವನ ಅಚ್ಚುಮೆಚ್ಚಿನ recreational activity. ಇಲ್ಲಿ ಕಲ್ಪನೆಯೇ ಬಂಡವಾಳ. ನಮ್ಮಿಷ್ಟದ ಅಂತ್ಯ ಕೊಡಬಹುದಾದ ಸ್ವಾತಂತ್ರ್ಯ , ಕನಿಷ್ಠ ಪಕ್ಷ ಇಲ್ಲಾದರೂ ನಮಗೆ ಬೇಕಾದಂತೆ ಬದುಕಬಹುದು ಎನ್ನುವ ಸುಪ್ತಾಲೋಚನೆಯೇ ಆತನನ್ನು ಪದೇ ಪದೇ ಆ ವೃದ್ಧನ ಹತ್ತಿರಕ್ಕೆಳೆದು ತರುತ್ತಿರುತ್ತದೆ. ದೂರದ ಕೋರ್ಸಿಕಾ ಹೆಸರಿನ ದ್ವೀಪವೊಂದರಲ್ಲಿ ಲಗೇಜ್ , ಪಾಸ್ಪೋರ್ಟ್ , ಹಣ ಎಲ್ಲವನ್ನೂ ಕಳೆದುಕೊಂಡು ಪರದಾಡುತ್ತಿರುವ ನಾಯಕಿ ತಾರಾಗೆ ಸಂಬಂಧಪಟ್ಟವರಿಗೆ ಕರೆ ಮಾಡಲು ಸಹಾಯ ಮಾಡಿದ್ದು , ಆ ಹೊತ್ತಲ್ಲಿ ಪರಿಚಯವಾಗಿದ್ದು ಇದೇ ಯುವಕ ವೇದ್. ಅದನ್ನು ಪರಿಚಯವಲ್ಲದ ಪರಿಚಯ ಎನ್ನಬಹುದು ಕಾರಣ ಆ ದ್ವೀಪದಲ್ಲಿ ಅವನೊಬ್ಬ ಅನಾಮಿಕ , ಆ ಹೊತ್ತಿಗೆ ಹೊಳೆದಂಥ ಒಂದು ಫ್ಯಾಂಟಸಿ ಹೆಸರನ್ನು ತನ್ನದೆಂದು ಹೇಳಿಕೊಳ್ಳುವ ಇವನು ತನ್ನ ನೈಜ ಹೆಸರು , ಅಡ್ರೆಸ್ಸು , ಕೆಲಸ -ಕಾರ್ಯ ಯಾವುದನ್ನೂ ಬಿಟ್ಟುಕೊಡದೇ, ಒಂದು ವಾರದ ಮಟ್ಟಿಗೆ ತನಗೆ ಬೇಕಾದಂತೆ ಮನಸುಪೂರ್ತಿ ಜೀವಿಸಲು ಬಂದಿರುತ್ತಾನೆ. ಅವನ ಇಂಗಿತವನ್ನು ತಿಳಿದ ನಾಯಕಿ ತಾರಾ ಕೂಡ ತನ್ನ ಐಡೆಂಟಿಟಿಯನ್ನು ಬಿಟ್ಟುಕೊಡದೇ ತಾನೂ ಒಂದ...