Posts

Showing posts from 2022

ಒಂದು ತಂಬಿಟ್ಟಿನ ಕತೆ

Image
  ನಾ ವು ಚಿಕ್ಕವರಿದ್ದಾಗ ನಮ್ಮೂರಲ್ಲಿ ಇದ್ದಿದ್ದು ಮೂರೇ ಮೂರು ಟಾಕೀಸು . ಆಸ್ಫೋಟ , ಆಕಸ್ಮಿಕ , ಜೀವನಚೈತ್ರ ಇವೆಲ್ಲ ಸಿನೆಮಾಗಳು ನಮ್ಮೂರು   ಸಾಗರ ಹಾಗೂ   ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿದ್ದು ಅನ್ನುವ ಕಾರಣಕ್ಕೆ ಥೀಯೇಟರ್ ನಲ್ಲಿ ನೋಡಿದ್ದು , ಅಬ್ಬಬ್ಬಾ ಅಂದ್ರೆ   ಒಟ್ಟಾರೆಯಾಗಿ ೮ - ೧೦ ಸಿನೆಮಾ ನೋಡಿದ್ದಿರಬಹುದು ಅಷ್ಟೇ .        ನನಗೆ   ನೆನಪಿದ್ದಂತೆ   ನೋಡಿದ ಮೊದಲ   ಸಿನೆಮಾ ಬಡ್ಡಿ ಬಂಗಾರಮ್ಮ , ಬೇಸಿಗೆ ರಜಕ್ಕೆಂದು ಊರಿಂದ ಬಂದಿರುವ ಅಕ್ಕ - ಅಣ್ಣಂದಿರ   ಜೊತೆಯಲ್ಲಿ ನೋಡಲು ಹೋಗಿದ್ದು , ಥೀಯೇಟರ್ ನ ಅಂಗಳದಲ್ಲಿ ನಾನು ಅದ್ಹೇಗೋ ತಪ್ಪಿಸಿಕೊಂಡು , ಪೆಚ್ಚುಮೋರೆ ಹಾಕಿ ನಿಂತಿದ್ದೆ , ಇನ್ನೇನು ಗಂಗೆ ಭಾಗೀರಥಿ ಸುರಿಸಬೇಕು ಅನ್ನುವಷ್ಟರಲ್ಲಿ ಅತ್ತೆಯ ಮಗಳು ಬಂದು ," ಇಲ್ಲಿದೀಯಾ ಪುಟ್ಟಿ ?" ಅಂತ ನನ್ನನ್ನ ಎತ್ತಿಕೊಂಡು ಸಮಾಧಾನ ಮಾಡಿದ್ದಳು .    Google Image    ನಂತರ ನೋಡಿದ ಸಿನೆಮಾ   ರಥಸಪ್ತಮಿ . ಅಕ್ಕನ ಗೆಳತಿಯ ಅಮ್ಮ , ನಾವು ಓದುವ   ಶಾಲೆಯಲ್ಲಿ ಹಿಂದಿ ಟೀಚರ್ ಆಗಿದ್ದರು,   ಹಾಗಾಗಿ ಅವರೊಟ್ಟಿಗೆ ಹೋಗಲು ಮನೆಯಲ್ಲಿ ಒಪ್ಪಿಗೆ ಕೊಟ್ಟಿದ್ದು . ಟೀಚರ್ ಮನೆಯ ನಾಲ್ಕು ಜನ , ನಾನ...

ಸಂಕ್ರಾಂತಿಯ ಮೆಲುಕು

Image
  ಇ ನ್ನೇನು ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದೆ , ಅಂಗಡಿ ಮುಂಗಟ್ಟುಗಳಲ್ಲಿ ಸಾಲು ಸಾಲಾಗಿ ಪೇರಿಸಿಟ್ಟ ಎಳ್ಳು-ಬೆಲ್ಲದ ಪೊಟ್ಟಣಗಳು , ಅಕ್ಕ ಪಕ್ಕದ ಮನೆಗಳ ತಾರಸಿಯಲ್ಲಿ   ಒಣಗಿಸಿದ   ಕೊಬ್ಬರಿ , ಶೇಂಗಾಬೀಜ ,  ಪುಟಾಣಿ , ಬೆಲ್ಲದ ತುಂಡುಗಳು   ಸಂಕ್ರಾಂತಿ ಹಬ್ಬ ಬಾಗಿಲಲ್ಲಿದೆ   ಎಂದು   ನೆನಪಿಸುತ್ತಿವೆ .       ಈ ಮೊದಲೊಮ್ಮೆ ಸಂಕ್ರಾಂತಿ   ಹಬ್ಬದ ಸಂಭ್ರಮದ ಬಗ್ಗೆ ಬರೆದಿದ್ದೆ .  ಚಂದದ ಉಡುಗೆಯುಟ್ಟು , ಹೂವಿನ ಜಡೆ , ತಲೆಗೆ ಪಾರಂಪರ್ಯವಾಗಿ ಬಂದ   ಚಿನ್ನದ ನಾಗರವನ್ನು ಧರಿಸಿ ಮನೆಮನೆಗೆ ಎಳ್ಳುಬೀರಲು ಹೋಗುವ   ಬಾಲ್ಯದ ಸಂಭ್ರಮವೇ ಬೇರೆಯಿತ್ತು .    ಹುಟ್ಟಿ ಬೆಳೆದಿದ್ದು ಮಲೆನಾಡಿನ ಕೊಂಕಣಿ ಬ್ರಾಹ್ಮಣ ಕುಟುಂಬ ದಲ್ಲಿ.   ಮನೆಯಲ್ಲಿ ಹಬ್ಬ ಹರಿದಿನಗಳನ್ನು ಶಾಸ್ತ್ರೋಕ್ತವಾಗಿ , ಮಡಿ - ಮೈಲಿಗೆ , ಭಯ – ಭಕ್ತಿಗಳಿಂದ   ಆಚರಿಸುವ   ಸಂಪ್ರದಾಯ . ಆದರೆ   ಸಂಕ್ರಾಂತಿಯಂದು ನಾವು ಬೀರುತ್ತಿದ್ದಿದ್ದು ಎಳ್ಳು - ಬೆಲ್ಲವಲ್ಲ , ಬದಲಿಗೆ   ಕುಸುರೆಳ್ಳು   ಎಂದು   ಕರೆಯಲ್ಪಡುವ   ಮನೆಯಲ್ಲೇ   ಪಾಕ   ಹಚ್ಚಿ ತಯಾರಿಸಿದ ಸಂಕ್ರಾಂತಿ ಕಾಳುಗಳನ್ನು .  ಕೊಂಕಣಿ   ಬ್ಯಾಣದಲ್ಲಿ   ಬಾಡಿಗ...