ಒಂದು ತಂಬಿಟ್ಟಿನ ಕತೆ
ನಾ ವು ಚಿಕ್ಕವರಿದ್ದಾಗ ನಮ್ಮೂರಲ್ಲಿ ಇದ್ದಿದ್ದು ಮೂರೇ ಮೂರು ಟಾಕೀಸು . ಆಸ್ಫೋಟ , ಆಕಸ್ಮಿಕ , ಜೀವನಚೈತ್ರ ಇವೆಲ್ಲ ಸಿನೆಮಾಗಳು ನಮ್ಮೂರು ಸಾಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿದ್ದು ಅನ್ನುವ ಕಾರಣಕ್ಕೆ ಥೀಯೇಟರ್ ನಲ್ಲಿ ನೋಡಿದ್ದು , ಅಬ್ಬಬ್ಬಾ ಅಂದ್ರೆ ಒಟ್ಟಾರೆಯಾಗಿ ೮ - ೧೦ ಸಿನೆಮಾ ನೋಡಿದ್ದಿರಬಹುದು ಅಷ್ಟೇ . ನನಗೆ ನೆನಪಿದ್ದಂತೆ ನೋಡಿದ ಮೊದಲ ಸಿನೆಮಾ ಬಡ್ಡಿ ಬಂಗಾರಮ್ಮ , ಬೇಸಿಗೆ ರಜಕ್ಕೆಂದು ಊರಿಂದ ಬಂದಿರುವ ಅಕ್ಕ - ಅಣ್ಣಂದಿರ ಜೊತೆಯಲ್ಲಿ ನೋಡಲು ಹೋಗಿದ್ದು , ಥೀಯೇಟರ್ ನ ಅಂಗಳದಲ್ಲಿ ನಾನು ಅದ್ಹೇಗೋ ತಪ್ಪಿಸಿಕೊಂಡು , ಪೆಚ್ಚುಮೋರೆ ಹಾಕಿ ನಿಂತಿದ್ದೆ , ಇನ್ನೇನು ಗಂಗೆ ಭಾಗೀರಥಿ ಸುರಿಸಬೇಕು ಅನ್ನುವಷ್ಟರಲ್ಲಿ ಅತ್ತೆಯ ಮಗಳು ಬಂದು ," ಇಲ್ಲಿದೀಯಾ ಪುಟ್ಟಿ ?" ಅಂತ ನನ್ನನ್ನ ಎತ್ತಿಕೊಂಡು ಸಮಾಧಾನ ಮಾಡಿದ್ದಳು . Google Image ನಂತರ ನೋಡಿದ ಸಿನೆಮಾ ರಥಸಪ್ತಮಿ . ಅಕ್ಕನ ಗೆಳತಿಯ ಅಮ್ಮ , ನಾವು ಓದುವ ಶಾಲೆಯಲ್ಲಿ ಹಿಂದಿ ಟೀಚರ್ ಆಗಿದ್ದರು, ಹಾಗಾಗಿ ಅವರೊಟ್ಟಿಗೆ ಹೋಗಲು ಮನೆಯಲ್ಲಿ ಒಪ್ಪಿಗೆ ಕೊಟ್ಟಿದ್ದು . ಟೀಚರ್ ಮನೆಯ ನಾಲ್ಕು ಜನ , ನಾನ...