Posts

Showing posts with the label ಕಡುಬು

ಹೀಗೊಂದು ಕಡುಬು ಪುರಾಣ

Image
                      ಸು ಮಾರು 10-15 ವರ್ಷಗಳ ಹಿಂದಿನ ಮಾತು.ಮಲೆನಾಡು ತವರುಮನೆಯಾದ ನನಗೆ, ಅಲ್ಲಿನ ಭೀಕರ ಮಳೆಗೆ ಯಾರಾದರೂ ನೆರೆಹೊರೆಯವರ ಮನೆಯಲ್ಲಿ ಹಲಸಿನ ಮರದ ರೆಂಬೆ ಮುರಿದು ಬಿದ್ದಾಗ ಅದರ ಎಲೆಗಳನ್ನು ತಂದು ಅಮ್ಮನಿಗೆ ಒಪ್ಪಿಸುವುದು ಅಪರೂಪದ ಕಾಯಕವಾಗಿತ್ತು. ಆ ಎಲೆಗಳನ್ನು ಸ್ವಚ್ಛವಾಗಿ ತೊಳೆದು, ಖೊಟ್ಟೆ ಹೆಣೆಯಲು ಅಣಿಮಾಡಿಕೊಡುವುದಷ್ಟಕ್ಕೆ ನನ್ನ  ಜ್ನಾನ ಸೀಮಿತವಾಗಿತ್ತು.ನನ್ನಮ್ಮ ಆ ಎಲೆಗಳನ್ನು ಬಳಸಿ ರುಚಿ-ಶುಚಿಯಾದ ಖೊಟ್ಟೆ ಕಡುಬು ತಯಾರಿಸುತ್ತಿದ್ದರು.              ಮೊನ್ನೆ ಊರಿನಲ್ಲಿರುವ  ನನ್ನಮ್ಮ ಅನಿರೀಕ್ಷಿತವಾಗಿ ಬೆಂಗಳೂರಿಗೆ ಬರುವ ಪ್ರಸಂಗ ಎದುರಾಯಿತು.ಕಾರಣಾಂತರದಿಂದ ಅಮ್ಮನಿಗೆ ನಮ್ಮ ಮನೆಗೆ ಭೇಟಿ ಕೊಡಲಾಗಲಿಲ್ಲ.ಎಷ್ಟೆಂದರೂ ಮಾತ್ರವಾತ್ಸಲ್ಯ,ನನಗಾಗಿ ಊರಿಂದ ಸ್ವಲ್ಪ ಹಲಸಿನ ಎಲೆಗಳನ್ನು ತಂದಿದ್ದರು.ಜೊತೆಗೆ ಕಡುಬು ಮಾಡಿ ತಿನ್ನಿರೆಂಬ ಆದೇಶವನ್ನೂ ಇತ್ತರು.ಪಾಪ ಧಾವಂತದಲ್ಲಿ ಅಮ್ಮ, ಕಡುಬು ಹೆಣೆಯುವ ಕಡ್ಡಿಗಳನ್ನು  ಕೊಡಲು ಮರೆತೇಬಿಟ್ಟರು.ನಾನು ತಕ್ಷಣ ಫೋನಾಯಿಸಿದಾಗ"ಏನ್ಮಾಡಕ್ಕಾಗುತ್ತೆ, ಸಲ್ಪ ಎಲೆ ಹರಿದು ಉದ್ದಿನ ಹಿಟ್ಟಿಗೆ ಬೆರೆಸಿ ಇಡ್ಲಿ ಮಾಡು, ಕಡುಬಿನ ಪರಿಮಳ ಬರುತ್ತೆ, ಕಡುಬು ತಿಂದ ಹಾಗೆ ಇರುತ್ತೆ" ಎಂದು ಸಮಾಧಾನಿಸಿದರು. ಕಡ್ಡಿಗಳಿಲ್ಲ ಎನ್ನುವ ತ...