Posts

Showing posts with the label ನಾಳೆಗಳು

ಸಾವಿಲ್ಲದ ನಾಳೆಗಳು...ನಾಳೆಗಳಿಲ್ಲದ ಸಾವುಗಳು...

Image
  S peaking Tree   ಆಂಗ್ಲ ಪತ್ರಿಕೆಯಲ್ಲಿ ಕೆಲವು ವರ್ಷಗಳ ಹಿಂದೆ   ಬಂದ ಸಣ್ಣ ಕಥೆ ಯನ್ನು ಕನ್ನಡೀಕರಿಸಿ ಅದಕ್ಕೆ ನಂದೊಂದಿಷ್ಟು ಸಾಲುಗಳನ್ನು ಸೇರಿಸಿ ಕಥೆಯನ್ನು ಸ್ವಲ್ಪ ವಿಸ್ತೃತಗೊಳಿಸಿದ್ದೇನೆ ..    ಖಾಸಗಿ ಸಂಸ್ಥೆಯಲ್ಲಿ ಅವನೊಬ್ಬ ಗುಮಾಸ್ತ .  ಮಡದಿ , ಎರಡು ಮಕ್ಕಳು , ಸ್ವಂತ ಮನೆ , ಕಾರು ಜೊತೆಗೆ ಐದಂಕಿ ಸಂಬಳದ ಜೀವನ .  ಬೆಳಗಾಗೆದ್ದು ಪ್ರಾತಃವಿಧಿಗಳನ್ನು ಪೂರೈಸಿ ,  ನ್ಯೂಸ್ ಪೇಪರನೊಮ್ಮೆ ತಿರುವಿ , ತಿಂಡಿ ತಿಂದು ಮಕ್ಕಳಿಬ್ಬರನ್ನು ಅವರ ಕಾಲೇಜಿಗೆ ಡ್ರಾಪ್ ಕೊಟ್ಟು   ಆಫೀಸ್ ಸೇರೋದು , ತನ್ನ ಕೆಲಸಗಳನ್ನು ಅಚ್ಚುಕಟ್ಟಗಿ ಮುಗಿಸಿ ಸಾಯಂಕಾಲ  7 ಕ್ಕೆ ಮನೆಗೆ  ವಾಪಾಸಾಗೋದು , ಮಡದಿ ಮಕ್ಕಳೊಂದಿಗೆ ನಾಲ್ಕಾರು ಮಾತು , ಟಿ . ವಿ . ಯಲ್ಲಿ ಚಾನೆಲ್ ಬದಲಾಯಿಸುತ್ತಾ ನ್ಯೂಸ್ ನೋಡೋದು , ಹಾಗೇ ಊಟ , ಹಾಸಿಗೆ ಸೇರೋದು ... ಹೀಗೆ ಸಾಗಿತ್ತು ದಿನಚರಿ ..    ಹೀಗೆ ಒಮ್ಮೆ ಚಾನೆಲ್ ಬದಲಾಯಿಸುತ್ತಿದ್ದಾಗ ಒಂದು ವಿಷಯ ಆತನ ಗಮನ ಸೆಳೆಯಿತು . ಅದು ವ್ಯಕ್ತಿಯೊಬ್ಬನ ಸರಾಸರಿ ಜೀವಿತಾವಧಿ ಎಷ್ಟು , ಎಂಬ    ಅಂಕಿಅಂಶದ ಬಗೆಗಿನ ಸಮೀಕ್ಷೆಯ ವರದಿ .    ಈಗಾಗಲೇ 50 ವರ್ಷದ ಆಸುಪಾಸಿನಲ್ಲಿ ದ್ದ.  ಆತ ತಾನು ಬದುಕಿರಬಹುದಾದ ವರ್ಷ ,...