ಮಕ್ಕಳ ಪಾಲನೆ ಮತ್ತು ಶಿಸ್ತು
ತ ಮ್ಮ ಮಕ್ಕಳನ್ನುಶಿಸ್ತಿನಿಂದ ಬೆಳೆಸಬೇಕೆಂಬ ಆಸೆ ಎಲ್ಲಾ ಪೋಷಕರಿಗೂ ಇರುತ್ತದೆ . ನಮಗಂತೂ ಸುಖ ಸೌಲತ್ತು ಇರಲಿಲ್ಲ , ನಮ್ಮ ಮಕ್ಕಳಿಗಾದರೂ ಇದ್ದಿದ್ದೆಲ್ಲ ಕೊಡಿಸೋಣ ಎಂದು ಕೆಲವರಿಗೆ ಅನಿಸಿದರೆ , ನಮ್ಮ ತಂದೆ ತಾಯಿ ಬಹಳ ಕಟ್ಟುನಿಟ್ಟಾಗಿದ್ದರು ಅದೇ ರೀತಿ ಇದ್ದರೆ ಮಾತ್ರ ಮಕ್ಕಳು ಶಿಸ್ತು ಕಲಿಯುತ್ತಾರೆ ಅನ್ನುವುದು ಇನ್ನು ಕೆಲವರ ಅಂಬೋಣ . ಅತೀ ಪ್ರೀತಿ ಮಕ್ಕಳನ್ನು ಹಾಳು ಮಾಡಬಹುದೆಂಬ ಭಯವಿದ್ದರೆ , ಶಿಕ್ಷೆಯಿಂದ ಮಕ್ಕಳಿಗೆ ಪೋಷಕರ ಮೇಲಿನ ಪ್ರೀತಿ ಕಡಿಮೆಯಾಗಬಹುದೆಂಬ ಆತಂಕ ಕೂಡ ಉಂಟಾಗುತ್ತದೆ. ಮಕ್ಕಳ ಪಾಲನಾಕ್ರಮದಲ್ಲಿ ಮುಖ್ಯವಾಗಿ ಮೂರು ವಿಧಗಳನ್ನು ಕಾಣಬಹುದು ಅಧಿಕಾರ ಚಲಾಯಿಸುವ ಅಥವಾ ಅತೀ ಕಠಿಣ ಶಿಸ್ತಿನಿಂದ ಕೂಡಿದ ಪಾಲನೆ : ಇಲ್ಲಿ ಪೋಷಕರು ಸಂಪೂರ್ಣವಾಗಿ ತಮ್ಮ ಮಕ್ಕಳನ್ನು ನಿಯಂತ್ರಿಸುತ್ತಾರೆ . ಪ್ರತಿಯೊಂದಕ್ಕೂ ತಾವು ಮಕ್ಕಳಿಗೆ ಆದೇಶವನ್ನು ನೀಡಿ , ಕೊಟ್ಟ ಕೆಲಸವನ್ನು ಮರು ಮಾತನಾಡದೇ ಪಾಲಿಸುವಂತೆ ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ . ಶಿಕ್ಷೆಯ ಭಯ ಮತ್ತು ಬಹುಮಾನದ ಆಸೆಯನ್ನು ಮಕ್ಕಳಲ್ಲಿ ಹುಟ್ಟಿಸಿ ಚೌಕಟ್ಟನ್ನು ಹಾಕುತ್ತಾರೆ . ಬಾಲ್ಯದಲ್ಲೇನೋ ಮಕ್ಕಳು ಭಯದಿಂದ ವಿಧೇಯತೆಯನ್ನು ತೋರಿಸುತ್ತ...