Experiment ಚಿಗಳಿ
Experimen t : ಚಿಗಳಿ ತಯಾರಿಸುವುದು . Time : ಪ್ರೈಮರಿ , ಹೈಸ್ಕೂಲು ಶಾಲೆಯ ಬೇಸಿಗೆ ರಜಾ ದಿನಗಳು. Aim : ಸಿಕ್ಕಾಪಟ್ಟೆ ರುಚಿಯಾದ ಚಿಗಳಿ ತಯಾರಿಸುವುದು ಮತ್ತು ತಿನ್ನುವುದು. Apparatus : ಕುಟ್ಟಣಿ ಅಥವಾ ಪುಟ್ಟ ರುಬ್ಬುವ ಕಲ್ಲು , ಹೊಸಾ ಪೊರಕೆಯ 3-4 ಕಡ್ಡಿಗಳು ( ಹೊಸ ಪೊರಕೆ ಇಲ್ಲದಿದ್ದರೆ ಅಮ್ಮ ಅಂಗಳವನ್ನು ಗುಡಿಸುವ ಪೊರಕೆಯ ಕಡ್ಡಿಯನ್ನೇ ತೆಗೆದು ಸ್ವಚ್ಛವಾಗಿ ತೊಳೆದುಕೊಳ್ಳತಕ್ಕದ್ದು. ) Ingredients : ಚೊಕ್ಕ ಮಾಡಿದ ಹುಣಸೇ ಹಣ್ಣು , ಹಸಿ ಮೆಣಸಿನಕಾಯಿ , ಬೆಲ್ಲ, ಉಪ್ಪು, ಇಂಗು ಮತ್ತು ಬೆಳ್ಳುಳ್ಳಿ ( optional) Google Image People Involved: ರಜಕ್ಕೆಂದು ಮನೆಗೆ ಬಂದ ನೆಂಟರ ಮಕ್ಕಳು , ಮತ್ತು ಮನೆಯಲ್ಲಿರ...