ರಿಮೋಟಾಯಣ

 

 ಗಷ್ಟೇ ನಮ್ಮ ಮನೆಯಲ್ಲಿರೋ ಕ್ರೌನ್ ಟೀವಿಯನ್ನು ಮಾರಿ ಹೊಸಾ ವೀಡಿಯೋಕಾನ್ ಟೀವಿಯನ್ನು ಕೊಂಡು ತಂದಿದ್ದರು.ಇನ್ನೂ ಸಂತೋಷವೆಂದರೆ ಜೊತೆಗೊಂದು ರಿಮೋಟ್ ಕೂಡ ಇತ್ತು.ಹದಿನೈದು ಮಂದಿ ಇರುವ ಅವಿಭಕ್ತ ಕುಟುಂಬದಲ್ಲಿ ನಾವು ಆರೇಳು ಮಕ್ಕಳುಎಲ್ಲರಿಗೂ ರಿಮೋಟ್ ಹೇಗೆ ಕೆಲಸ ಮಾಡುತ್ತದೆ ಎಂದು ನೋಡುವ ಕುತೂಹಲ.ರಿಮೋಟ್ ಇಲ್ಲದೇ ಟೀವಿಯಲ್ಲೇ ಚಾನೆಲ್ ಬದಲಾಯಿಸಬಾರದೆಂದು ಅಪ್ಪ ಕಟ್ಟಪ್ಪಣೆ ಮಾಡಿದ್ದರು.(ಹಳೇ ಟೀವಿ ಹಾಳಾಗಿದ್ದು ಕಾರಣದಿಂದಲೇ!!)

   ಇರೋ ಆರು ಜನರಿಗೆ ಆರು ಬೇರೆ ಬೇರೆ ಕಾರ್ಯಕ್ರಮ ನೋಡಬೇಕೆಂಬ ಆಸೆ.ಆದರೆ ರಿಮೋಟ್ ಕೈಯಲ್ಲಿದ್ದವರು ಹಾಕಿದ ಚಾನಲ್ ಅಷ್ಟನ್ನೇ ನೋಡಬೇಕಾದ ಪರಿಸ್ಥಿತಿ. ನಮ್ಮಕ್ಕನಿಗೆ  ಚಂದ್ರಕಾಂತಾ, ವಿಕ್ರಮ್ ಔರ್ ಬೇತಾಳ್, ಸತ್ಯ ಹರೀಶ್ಚಂದ್ರಅಂತಹ ಪೌರಾಣಿಕ ಕಥೆಗಳಿಷ್ಟವಾದರೆ ನನಗೆ ಹಿಂದಿ ಹಾಡುಗಳನ್ನು ನೋಡುವಾಸೆ. ಜ಼ೀ ಟೀವಿಯಲ್ಲಿ ಬರುತ್ತಿದ್ದತಾರಾ, ಬನೇಗಿ ಅಪ್ನೀ ಬಾತ್ ಅಂತಹ  ಧಾರವಾಹಿಗಳನ್ನು ಇಬ್ಬರೂ ನೋಡುತ್ತಿದ್ದೆವು. ಮನೆಯಲ್ಲಿ ಕೊಂಕಣಿ ಮಾತನಾಡುತ್ತಿದ್ದೆವು ಹಾಗಾಗಿ  ಹಿಂದಿ ಭಾಷೆ ಪೂರ್ತಿಯಾಗಿ ಅರ್ಥವಾಗುತ್ತಿತ್ತು, ಸುಮಾರಿಗೆ ಮಾತನಾಡಲೂ ಬರುತ್ತಿತ್ತು.

   ತಮ್ಮಂದಿರಿಗೆ ಕ್ರಿಕೆಟ್, ರೆಸ್ಲಿಂಗ್, ಡಿಶುಂ ಡಿಶುಂ ಸಿನೆಮಾ ನೋಡುವಾಸೆಯಾದರೆ ತಂಗಿಯರು ಡೆನ್ನಿಸ್ ಮೆನ್ನಿಸ್, ಡ್ರೀಮ್ ಆಫ್ ಜೀನಿ, ತ್ರೀ ಸ್ಟೂಜಸ್ ಇಂತಹ ಮಕ್ಕಳ ಕಾರ್ಯಕ್ರಮ ನೋಡ್ತಿದ್ದರು. “ಸ್ಮಾಲ್ ವಂಡರ್ಧಾರವಾಹಿ ಮಾತ್ರ ಎಲ್ಲರೂ ಇಷ್ಟಪಟ್ಟು ನೋಡುತ್ತಿದ್ದೆವು.

    ಸರಿ , ರಿಮೋಟ್ ಸಮಸ್ಯೆಯನ್ನು ಬಗೆಹರಿಸಲು ನಾವು ನಾವೇ ಸೇರಿ ಕೆಲವು ರೂಲ್ಸ್ ಮಾಡೀಕೊಂಡೆವು.

೧. ಯಾವುದೇ ಕಾರಣವಿರಲಿ ರಿಮೋಟ್ ಅನ್ನು ಹಾಲ್ ನಿಂದ ಹೊರ ಒಯ್ಯುವಂತಿಲ್ಲ.

ಒಬ್ಬರು  ಹೆಚ್ಚೆಂದರೆ ಒಂದು ತಾಸು ಮಾತ್ರ ಅವರ ಇಷ್ಟದ ಚಾನೆಲ್ ನೋಡಬಹುದು,              ಆಮೇಲೆ ರಿಮೋಟ್ ಬೇರೆಯವರಿಗೆ ಕೊಡಬೇಕು .

೩. ಕರೆಂಟ್ ಹೋದಾಗ ರಿಮೋಟ್  ಅನ್ನು ಟೀವಿಯ ಪಕ್ಕದಲ್ಲಿ ಇಡತಕ್ಕದ್ದು, ಒಮ್ಮೆ ಕರೆಂಟ್ ಬಂದ ಮೇಲೆ ಸಿಕ್ಕಿದವರಿಗೆ ಶಿವಾಯಃ.

   ನಾವೇ ಮಾಡಿಕೊಂಡ ರೂಲ್ಸ್ ನಮಗೆ ಬಹಳಷ್ಟು ಬಾರಿ ಕಿರಿಯನ್ನುಂಟುಮಾಡುತ್ತಿದ್ದವು . ಊಟ, ತಿಂಡಿ , ಬಾತ್ ರೂಂ ಗೆ ಹೋಗಬೇಕಾದರೆ  ಒಲ್ಲದ ಮನಸ್ಸಿನಿಂದ ರಿಮೋಟ್ ಬೇರೆಯವರಿಗೆ  ಕೊಡಬೇಕಾಗುತ್ತಿತ್ತು.ಅದರಲ್ಲೂ ಸ್ವಲ ತಲೆ ಓಡಿಸಿನಾನು ವಾಪಸ್ ಬಂದ ಮೇಲೆ ನನಗೆ ರಿಮೋಟ್ ವಾಪಸ್ ಕೊಟ್ರೆ, ನೀ ಊಟಕ್ಕೆ ಹೋದಾಗ ನಾನು ನಿನಗೆ ಹೆಲ್ಪ್ ಮಾಡ್ತೀನಿಅನ್ನೋ ಒಪ್ಪಂದ ಮಾಡಿಕೊಳ್ಳುತ್ತಿದ್ದೆವು.

   ನನ್ನ ತಮ್ಮ ಅವನ ಒಂದು ಗಂಟೆ ಅವಧಿ ಮುಗಿಯುತ್ತಾ ಬಂದ ಹಾಗೆಯೇ ನಮಗ್ಯಾರಿಗೂ ಗೊತ್ತಾಗದ ಹಾಗೇ ಟೀವಿಯ ಸೆನ್ಸರ್ ಎದುರಲ್ಲಿ ಏನಾದರೂ ವಸ್ತುವನ್ನು ಅಡ್ಡವಾಗಿ ಇಟ್ಟು ಬರುತ್ತಿದ್ದ.  ನನ್ನ ನಾವು ಅವನು ಕೊಟ್ಟ  ರಿಮೋಟ್ ಅನ್ನು ಟೀವಿಯ ಮುಂದೆ ಬೇರೆ ಬೇರೆ  ಕೋನದಲ್ಲಿ  ಹಿಡಿದು ಅದೆಷ್ಟು ಒತ್ತಿದರೂ ಚಾನಲ್ ಬದಲಾಗ್ತಿರ್ಲಿಲ್ಲ.

Google Image



   ಇನ್ನು ಡಿ ಡಿ ಯಲ್ಲಿ ಅಪರೂಪಕ್ಕೆ ಪ್ರಾದೇಶಿಕ ಭಾಷಾ ಚಿತ್ರವೆಂದು ತಬರನ ಕಥೆ, ಬೆಟ್ಟದ ಹೂವು ನಂತಹ ಕನ್ನಡ ಸಿನೆಮಾಗಳು  ಬರುತ್ತಿದ್ದವು .ನನಗೆ  ಹಾಗೂ ಅಕ್ಕನಿಗೆ ನೋಡುವ ಇಷ್ಟವಿದ್ದರೂ ಇಬ್ಬರಿಗೂ ಸೇರಿ ಎರಡು ಗಂಟೆ ಮಾತ್ರ ನೋಡಲು ಅವಕಾಶ,ಇನ್ನೊಂದು ಗಂಟೆಗೇನು ಮಾಡೋದು?..ನಮಗೆ ಗೊತ್ತಿದ್ದ ಅಲ್ಪಸಲ್ಪ ಸೈನ್ಸ್ ನಾಲೆಡ್ಜ್ ಉಪಯೋಗಿಸಿ, ನಿಧಾನವಾಗಿ ರೆಮೋಟ್ ಬಿಚ್ಚಿ ಅದರ ಸೆಲ್ ಗಳನ್ನು  ತಿರ್ಗಾಮುರ್ಗಾ  ಜೋಡಿಸಿ ರಿಮೋಟ್ ಹಿಂತಿರುಗಿಸುತಿದ್ವಿ. ಮೋಸ ಹೇಗೋ ತಮ್ಮನಿಗೆ ಗೊತ್ತಾಗ್ತಿತ್ತು. ಹೀಗೆಲ್ಲಾ ಮಾಡಿದರೆ ನಾಳೆ ಸ್ಮಾಲ್ ವಂಡರ್ ನೋಡಲು  ಬಿಡೊಲ್ಲ ಎಂಬುದನ್ನು ರಾಗವಾಗಿ  “ಕಾಲ ಮತ್ತೊಮ್ಮೆ ಬಂದೇ ಬರತ್ತೆ, ನಾಳೆ ಸ್ಮಾಲ್ ವಂಡರ್ ಇದ್ದೇ ಇರತ್ತೆ” ಎಂದು ಹಾಡ್ತಿದ್ದ.

     ಈ ರೀತಿಯ ಯಾವುದೇ ಪ್ಲಾನ್ ವರ್ಕ್ ಆಗದಿದ್ದಾಗ ಸುಮ್ನೆ ಹೊರಗೆ ಜಗಲಿಗೆ ಹೋದ ಹಾಗೆ ನಟಿಸಿ ನಿಧಾನವಾಗಿ ಮೈನ್ ಸ್ವಿಚ್ ಆಫ್ ಮಾಡಿ ಬರುವುದಿತ್ತು, ಉಳಿದೋರೆಲ್ಲಕರೆಂಟ್ ಹೋಯ್ತು, ಕರೆಂಟ್ ಹೋಯ್ತುಅಂತ ಕೂಗೋರು, ರಿಮೋಟ್ ಟೀವಿ ಪಕ್ಕ ಇಡುವಂತೆ ಒತ್ತಾಯಿಸೋರು, ಒಮ್ಮೆ  ರಿಮೋಟ್ ಟೀವಿ ಪಕ್ಕ ಇಟ್ಟಾಕ್ಷಣ ಮತ್ತೆ ಮೈನ್ಸ್ ಆನ್ ಮಾಡಿ ರಿಮೋಟ್ ಬಾಚಿಕೊಳ್ಳೊದು.

   ಒಮ್ಮೆಯಂತೂ ಜಗಳ ತಾರಕಕ್ಕೇರಿ ನಾನು  ತಮ್ಮ ಇಬ್ರೂ ಹೋಗಿ ಶೋ ಕೇಸ್ ಗೆ ಗುದ್ದಿದ್ವಿ.ರಿಮೋಟ್ ಬಾಚಿಕೊಳ್ಳುವ ಧಾವಂತದಲ್ಲಿ ನೂಕಿದ್ದು , ಬಿದ್ದಿದ್ದು ಗೊತ್ತಾಗುವವರೆಗೆ ಗಾಜು ಪುಡಿ ಪುಡಿಯಾಗಿತ್ತು, ಪರಿಸ್ಥಿತಿ ಅರ್ಥವಾಗಿ ಇಬ್ಬರೂ ಗೋಳೋ   ಎಂದು ಅಳತೊಡಗಿದೆವು, ಬರೀ ಬೈಗುಳ ಸಿಕ್ಕವೇ ಹೊರತು ಸಧ್ಯ ಇಬ್ಬರಿಗೂ ಪೆಟ್ಟು ಸಿಗಲಿಲ್ಲ.

   ವರ್ಷಗಳುರುಳಿದಂತೆ ವಿದ್ಯಾಭ್ಯಾಸ, ಕೆಲಸ, ಮದುವೆ ಅಂತ ಎಲ್ಲರೂ ಬೆಂಗಳೂರು ಸೇರಿಕೊಂಡೆವು, ಊರ ಮನೆಯಲ್ಲಿ ಈಗ ಬರೀ ಹಿರಿಯರು ಮಾತ್ರ. ನಮ್ಮ ಅಜ್ಜಿಯೇ ಈಗ ರಿಮೋಟ್ ಓನರ್.ಎಲ್ಲೋ - ವರ್ಷಗಳಿಗೊಮ್ಮೆ ಎಲ್ಲರೂ ಒಟ್ಟಾಗಿ ಅಲ್ಲಿ ಸೇರಿದಾಗ  ಯಾವುದೇ ಮೋಸವಿಲ್ಲದೇ ರಿಮೋಟ್ ರೂಲ್ಸ್ ಪಾಲಿಸುತ್ತೇವೆ. :-) :-)


( ನವೆಂಬರ್ 2012 ರಲ್ಲಿ ಬರೆದದ್ದು)

Popular posts from this blog

ಮನೆಪಾಠ

ಅಜ್ಜನ ನೆನಪು

ಒಂದು ತಂಬಿಟ್ಟಿನ ಕತೆ